Home
ಸದ್ಯದ ವಿಷಯಗಳು ![]()
==> 7.25 ಹಾಗು 3% ಯೋಜನೆಯ ಅನುಧಾನದ ಅಡಿ ವಿವಿಧ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಪ್ರಕಟಣೆ
==> 2009-10 ನೇ ಸಾಲಿನ ರಾಜ್ಯ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಕರೆಯಲಾಗಿದೆ. ಪ್ರಕಟಣೆ
==> ಸೇವಾ ಮಟ್ಟದ ಬೆಂಚ್ ಮಾರ್ಕಿಂಗ್ (SLB)ಗಳ ಘೋಷಣೆ
==> ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಮಯ 2011 (Karnataka Guarantee Service Act 2011)
==> 2010-11 ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಕರೆಯಲಾಗಿದೆ .ಪ್ರಕಟಣೆ
* * * * * * * * * * * * * * * * * * * * * * * * * * * * * * * * * * *
ಪಟ್ಟಣದ ಕಿರು ಮಾಹಿತಿ: ಪಟ್ಟಣ ಪಂಚಾಯಿತಿ 1956 (02.07.1956) ರಲ್ಲಿ ಸ್ಥಾಪನೆಯಾಯಿತು. ಕೊಟ್ಟೂರು ಪಟ್ಟಣವು ತನ್ನ ಜಿಲ್ಲೆಯಾದಂತ ಬಳ್ಳಾರಿ ಯಿಂದ 110 ಕಿ.ಮಿ. ಇದ್ದು ಮತ್ತು ತನ್ನ ತಾಲ್ಲೂಕು ಕೂಡ್ಲಿಗಿ ಯಿಂದ 20 ಕಿ.ಮಿ ಇರುತ್ತದೆ. ಕೊಟ್ಟೂರು ಕ್ಷೇತ್ರಕ್ಕೆ ದೇಗುಲಗಳ ನಾಡು ಹಾಗೂ ಶಿಕ್ಷಣದ ಕೇಂದ್ರಬಿಂದು ಎಂದು ಕರೆಯುತ್ತಾರೆ. ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮದವರು ಪಟ್ಟಣಕ್ಕೆ ಅವಲಂಭಿತರಾಗಿದ್ದಾರೆ. ಪಟ್ಟಣದಲ್ಲಿ ಹರಿಹರ ದಿಂದ ಹೊಸಪೇಟೆ ಮಾರ್ಗವಾಗಿ ರೈಲು ಮಾರ್ಗವು ಹಾಯ್ದು ಹೋಗಿದೆ.ಪಟ್ಟಣದ ಒಟ್ಟಾರೆ ಜನಸಂಖ್ಯೆ 26,303 ( 2011 ಜನಗಣತಿ ಪ್ರಕಾರ) ಇರುತ್ತದೆ. ಪಟ್ಟಣವು 20 ವಾರ್ಡಗಳು ಮತ್ತು 41 ಬ್ಲಾಕ್ಗಳನ್ನು ಹೊಂದಿರುತ್ತದೆ.
ನಮ್ಮ ಧ್ಯೇಯೋದ್ದೇಶಗಳು: ಪಟ್ಟಣ ಪಂಚಾಯತಿಯ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು,ಪಟ್ಟಣ ಪಂಚಾಯತಿಯ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀವ ಅಳವಡಿಕೆ,ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನಯ ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಕೆ ಎಂ ಆರ್ ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ಪಟ್ಟಣ ಪಂಚಾಯತಿಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.
ಗಣಕೀಕರಣದ ಯೋಜನೆಗಳು ![]()
ಜನನ-ಮರಣ ಗಣಕೀಕರಣ : ಪ.ಪಂ. ನಲ್ಲಿ ಲಭ್ಯವಿರುವ 1980 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ, ಸಾರ್ವಜನಿಕರು ಪ.ಪಂ. ನ ವೆಬ್ಸೈಟ್ ನ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.kotturtown.gov.in
ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ. 10-00 ರಿಂದ ಸಂಜೆ ಗಂ. 6-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08391-225316, ಅಧಿಕೃತ ಅಂತರ್ಜಾಲ : www.kotturtown.gov.in
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 20 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು. More Information About GIS (Aasthi)
ಸ್ಥಳೀಯಸಂಸ್ಥೆ ವೆಬ್ಸೈಟ್ : ಕೊಟ್ಟೂರು ಪಟ್ಟಣ ಪಂಚಾಯತದ ಅಧಿಕೃತ ಅಂತರ್ಜಾಲ : www.kotturtown.gov.in ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಲೆಕ್ಕ ಪದ್ದತಿ : ಪಟ್ಟಣ ಪಂಚಾಯಿತಿಯಲ್ಲಿ ನಿಧಿಯಾಧಾರಿತ ಲೆಕ್ಕ ಪದ್ದತಿ (ಖರ್ಚು ವೆಚ್ಚಗಳು) ಫೆಬ್ರವರಿ 29-2012 ರವರೆಗೆ ಕಾಲೋಚಿತಗಳಿಸಲಾಗಿದೆ. ಹಾಗೂ 2012-13ನೇ ಸಾಲಿನ ಅಯವ್ಯಯ(ಬಜೆಟ್) ಮುಕ್ತಾಯಗೊಂಡಿರುತ್ತದೆ ಮತ್ತು 2010-11 ಸಾಲಿನ ಎ.ಪಿ.ಆರ್. ಮುಕ್ತಾಯ ಗೊಂಡಿದ್ದು ಸದ್ರಿ ಮಾಹಿತಿ ಯನ್ನು ವೆಬ್ಸೈಟ್ : www.kotturtown.gov.in ಮೂಲಕ ಪಡೆಯಬಹುದು.
This Page is Maintained by Smt Hanumantamma,Chief officer

